ಅವಲೋಕನ

ಗರ್ಭಗುಡಿ IVF ಕೇಂದ್ರದ ಬಗ್ಗೆ

ಗರ್ಭಗುಡಿಯು  ಹೊಸ ತಲೆಮಾರಿನ ಸಂತಾನಹೀನ ನಿವಾರಕ  ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದ್ದು, ಇದು ನಿರಂತರವಾಗಿ ಹೆಚ್ಚುತ್ತಿರುವ ಸಂತಾನ ಹೀನತೆ  ಸಮಸ್ಯೆಯನ್ನು ಪರಿಹರಿಸಲು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇದನ್ನು ಖ್ಯಾತ ಸ್ತ್ರೀರೋಗ ತಜ್ಞೆ ಮತ್ತು ಫಲವತ್ತತೆ ತಜ್ಞರಾದ ಡಾ.ಆಶಾ ಎಸ್ ವಿಜಯ್ ನೇತೃತ್ವದ ವೈದ್ಯರು  ಮತ್ತು ಆರೋಗ್ಯ ತಜ್ಞರ ತಂಡ ಸ್ಥಾಪಿಸಿದೆ.

ಜೆನಿಸಿಸ್

ನಮ್ಮ ಕಥೆಯು ನಮ್ಮ ವೈದ್ಯಕೀಯ ನಿರ್ದೇಶಕರಾದ ಡಾ. ಆಶಾ ವಿಜಯ್ ಅವರೊಂದಿಗೆ ಆರಂಭವಾಗುತ್ತದೆ.  ಡಾ. ಆಶಾ ವಿಜಯ್ ಅವರು  ಸ್ತ್ರೀರೋಗತಜ್ಞರಾಗಿ ಮತ್ತು ನಂತರ ಸನ್ನಿಧಿ ನರ್ಸಿಂಗ್ ಹೋಂನ ಸ್ಥಾಪಕರಾಗಿ ವೃತ್ತಿ ಆರಂಭಿಸಿದರು.ತಮ್ಮ  ವೃತ್ತಿಯ ಅಭ್ಯಾಸದ ಭಾಗವಾಗಿ 15 ವರ್ಷಗಳ ಗೈನೆಕ್, ಪ್ರಸೂತಿ ಮತ್ತು ಫಲವತ್ತತೆ ಸಮಸ್ಯೆಗಳನ್ನು ಎದುರಿಸುತ್ತಿರುವವರಲ್ಲಿ, ಸಂತಾನಹೀನತೆ  ಹೊಂದಿರುವ ಜನರಿಗೆ ಚಿಕಿತ್ಸೆ ನೀಡುವಲ್ಲಿ ಗೊಂದಲಗಳಿವೆ ಎಂದು ಅವರು ಅರಿತುಕೊಂಡರು.  ಸಂತಾನ ಹೀನತೆಯ ಕಾರಣಗಳು ಜನರಿಗೆ  ಅರಿವಿನ ಕೊರತೆ ಮತ್ತು ಅದರ ಚಿಕಿತ್ಸೆಗಳು, ಮಧ್ಯಮ ವರ್ಗದ ಕುಟುಂಬಕ್ಕೆ ತಲುಪಲಾರದಷ್ಟು  ದುಬಾರಿ ವಿಧಾನಗಳು ಮತ್ತು ಯಶಸ್ಸಿನ ದರ ಕಳಪೆಯಾಗಿರುವುದೇ ಆಗಿದೆ ಎಂದು ಅವರು ಮನಗಂಡರು. . ಮೊದಲು ತಮ್ಮ  ತಂಡದೊಂದಿಗೆ ಡಾ. ಆಶಾ, ಸಮಸ್ಯೆಯನ್ನು ಸಮಗ್ರವಾಗಿ ಅಭ್ಯಸಿಸಲು  ನಿರ್ಧರಿಸಿದಾಗ, ವಿಶ್ವ ದರ್ಜೆಯ ಚಿಕಿತ್ಸೆ ಮತ್ತು ಸೇವೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸಿಸಲು ನಿರ್ಧರಿಸಿದರು.. ಹೀಗೆ ಗರ್ಭಗುಡಿ  ಹುಟ್ಟಿಕೊಂಡಿತು.

ಸಂಸ್ಥಾಪಕರು ಮತ್ತು ನಿರ್ದೇಶಕರುಗಳು.

ಡಾ. ಆಶಾ ಎಸ್ ವಿಜಯ್

MBBS, DGO, DNB & FRM Germany | ಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕಿ

ಡಾ.ಆಶಾ ಎಸ್ ವಿಜಯ್ ಪ್ರಸಿದ್ಧ ಸ್ತ್ರೀರೋಗ ತಜ್ಞೆ ಮತ್ತು ಫಲವತ್ತತೆ ಮತ್ತು ಸಂತಾನೋತ್ಪತ್ತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಪ್ರಮುಖ ಹೆಸರು. ಅವರು  ಬಂಜೆತನ, ಪ್ರಸೂತಿ, ಸ್ತ್ರೀರೋಗ ಮತ್ತು ಸೊನಾಲಜಿ ಕ್ಷೇತ್ರದಲ್ಲಿ ಪರಿಣಿತಿಯನ್ನು …ಮತ್ತಷ್ಟು ಓದು

ಡಾ. ವಿಜಯ್ ಕುಮಾರ್ ಶೇಷಾದ್ರಿ

B.E, MBA | ಸಂಸ್ಥಾಪಕರು ಮತ್ತು ಸಿ ಇ ಒ 

ಶ್ರೀ ವಿಜಯ್ ಕುಮಾರ್ ಅವರು ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಯಶಸ್ವಿ ಉದ್ಯಮಿಗಳು . ಅವರು ಅನೇಕ ಇಂಜಿನಿಯರಿಂಗ್ ಕಂಪನಿಗಳನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ…ಮತ್ತಷ್ಟು ಓದು

ಹರಿ ಶ್ರೀನಿವಾಸನ್

ಸಹ ಸಂಸ್ಥಾಪಕರು ಮತ್ತು ನಿರ್ದೇಶಕರು

ಶ್ರೀಯುತ ಹರಿ ಯವರು  ಶಿಕ್ಷಣದಿಂದ ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಮತ್ತು ಉತ್ಸಾಹಿ ಉದ್ಯಮಿ. ಗರ್ಭಗುಡಿ ಯಲ್ಲಿ ಅವರು ನಿರ್ದೇಶಕರಾಗಿದ್ದಾರೆ.. ಇದಕ್ಕೂ ಮೊದಲು, ಅವರು ಬಹು ಯಶಸ್ವಿ…ಮತ್ತಷ್ಟು ಓದು

ಪುಷ್ಪಲತಾ ಎಂ ಎಸ್

B.E, M. Tech | ಸಹ -ಸಂಸ್ಥಾಪಕರು ಮತ್ತು ನಿರ್ದೇಶಕರು – ಕಾರ್ಯಾಚರಣೆ ವಿಭಾಗ

ಶ್ರೀಮತಿ ಪುಷ್ಪಲತಾ ಎಂ ಎಸ್   ರವರು  ಪ್ರತಿಷ್ಠಿತ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿದರು…ಮತ್ತಷ್ಟು ಓದು

ಮುಖ್ಯವಾದ ಮೌಲ್ಯಗಳು

  • ರೋಗಿಗಳಿಗೆ ಸೇವಾ ನಿಷ್ಠೆ ಮತ್ತು ಸಂಸ್ಥೆಯೊಂದಿಗೆ  ಆರ್ಥಿಕವಾದ ನಿಷ್ಠೆ.

  • ಎಲ್ಲಾ ಸಮಯದಲ್ಲೂ, ಎಲ್ಲಾ ಸಂದರ್ಭಗಳಲ್ಲಿಯೂ ನೈತಿಕ ಅಭ್ಯಾಸಗಳ ಸಂಪೂರ್ಣವಾದ  ಅನುಸರಣೆ.

  • ಸರ್ಕಾರಿ ನಿಯಮಗಳು,ವೈದ್ಯಕೀಯ ಮಂಡಳಿಯ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಮತ್ತು ಮುಖ್ಯವಾಗಿ ಪ್ರಕೃತಿಯ ನೈಸರ್ಗಿಕ ನಿಯಮಗಳಿಗೆ ಬದ್ಧರಾಗಿರುವುದು.

  • ರೋಗಿಗಳಿಗೆ, ಜನರಿಗೆ ಮತ್ತು ಪಾಲುದಾರರಿಗೆ ಆದ್ಯತೆ.

  • ಅತ್ಯುತ್ತಮ ಜನರನ್ನು ನಮಿಸಿಕೊಂಡು ಅವರಿಗೆ ತರಬೇತಿ ನೀಡಿ, ಅವರನ್ನು ಇಲ್ಲಿಯೇ ಉಳಿಸಿಕೊಳ್ಳುವುದು.

  • ಚಿಕಿತ್ಸೆಗಳನ್ನು ಭರಿಸಲಾಗದವರಿಗೆ ಚಿಕಿತ್ಸೆಗಳು ಮತ್ತು ವೆಚ್ಚಗಳ ವಿಷಯದಲ್ಲಿ ಸಾಮಾಜಿಕ  ಬದ್ಧತೆಯ ಜವಾಬ್ದಾರಿ.

ದೃಷ್ಟಿಕೋನ

ಬಲವಾದ ವೈಜ್ಞಾನಿಕ ವಿಧಾನ,ನೈತಿಕ ಮೌಲ್ಯಗಳು ಮತ್ತು ಮಾನವೀಯತೆಯಸ್ಪರ್ಶದಿಂದಾಗಿ ನಮ್ಮ  ಗರ್ಭಗುಡಿಯು ಜಾಗತಿಕವಾಗಿ ಪ್ರಸಿದ್ಧವಾದ ಸಂತಾನೋತ್ಪತ್ತಿ ಆರೋಗ್ಯ ವಿಶ್ವವಿದ್ಯಾಲಯವಾಗಿದೆ  ಮತ್ತು ಇದು ಅತ್ಯುನ್ನತ ಯಶಸ್ಸಿನ ಪ್ರಮಾಣವನ್ನು ಹೊಂದಿದೆ.