Financing

ಹಣಕಾಸು

ಗರ್ಭಗುಡಿಯಲ್ಲಿ, ಚಿಕಿತ್ಸೆಯ ವೆಚ್ಚವು ಪೋಷಕರಾಗುವ ನಿಮ್ಮ ಕನಸನ್ನು ಕಡಿತಗೊಳಿಸಬಾರದೆಂದು  ಎಂದು ನಾವು ನಂಬುತ್ತೇವೆ. ಆರೋಗ್ಯ ವಿಮೆ ಸಾಮಾನ್ಯವಾಗಿ ಸಂತಾನಹೀನತೆಗೆ  ಚಿಕಿತ್ಸೆ ನೀಡುವ ವೆಚ್ಚವನ್ನು ಒಳಗೊಂಡಿರುವುದಿಲ್ಲವಾದ್ದರಿಂದ, ಚಿಕಿತ್ಸೆಗಳು ಹೆಚ್ಚಾಗಿ ನಿರ್ಲಕ್ಷಿಸಲ್ಪಡುತ್ತವೆ ಮತ್ತು ಸಮಯವು ನಿಮ್ಮ ಕಡೆ ಇಲ್ಲದಿರುವುದರಿಂದ ಇದು ಸೂಕ್ತವಲ್ಲ. ಇದನ್ನು ಪರಿಗಣನೆಗೆ ತೆಗೆದುಕೊಂಡು, ಗರ್ಭಗುಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣಕಾಸಿನ ನೆರವು ನೀಡಲು ನಾವು ಉನ್ನತ ಹಣಕಾಸು ಸಂಸ್ಥೆಗಳಲ್ಲಿ ಒಂದನ್ನು ಹೊಂದಿದ್ದೇವೆ. ಈ ಹಣಕಾಸಿನ ಆಯ್ಕೆಯ ಉತ್ತಮ ಭಾಗವೆಂದರೆ ಅದನ್ನು ಮರುಪಾವತಿಯ ಆಯ್ಕೆಯೊಂದಿಗೆ ಶೂನ್ಯ ಶೇಕಡಾ ಬಡ್ಡಿದರದಲ್ಲಿ ಸುಲಭ ಕಂತುಗಳು ನೀಡಲಾಗಿದೆ.

ಹಣಕಾಸಿನ ಪ್ರಕ್ರಿಯೆ

ಒಂದರಿಂದ ಎರಡು ದಿನಗಳ  ಸಮಯದೊಂದಿಗೆ ಹಣಕಾಸಿನ ಪ್ರಕ್ರಿಯೆಯು ಸರಳ ಮತ್ತು ಸುಲಭವಾಗಿದೆ. ಹೆಚ್ಚಿನ ಪ್ರಕ್ರಿಯೆಯು ಡಿಜಿಟಲ್ ಆಗಿದೆ ಮತ್ತು ಹಣಕಾಸು ಸಂಸ್ಥೆಗೆ ಅವುಗಳ ಪರಿಶೀಲನೆ ಪ್ರಕ್ರಿಯೆಗೆ ಕೆಲವು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ಗರ್ಭಗುಡಿಯಲ್ಲಿ ಇರಿಸಿರುವ ಸಾಧನದ ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ದಸ್ತಾವೇಜುಗಳನ್ನು ನಂತರ ದಂಪತಿಗಳು ಪಡೆಯಬಹುದಾದ ಹಣಕಾಸಿನ ಪ್ರಮಾಣವನ್ನು ನಿರ್ಧರಿಸಲು ಹಣಕಾಸು ಸಂಸ್ಥೆಯು ಪರಿಶೀಲಿಸುತ್ತದೆ. ಕೇಳಿದ ದಾಖಲೆಗಳು ಕೂಡ ಕನಿಷ್ಠ ಮತ್ತು ಪ್ರಕ್ರಿಯೆಯು ಸಂಪೂರ್ಣವಾಗಿ ತೊಂದರೆಯಿಲ್ಲದ್ದಾಗಿದೆ.. ಹಣಕಾಸಿನ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಗರ್ಭಗುಡಿಯ ಸಿಬ್ಬಂದಿ ನಿಮಗೆ ಸಹಾಯ ಮಾಡುತ್ತಾರೆ.

ಕೇಳಲಾಗುವ  ಸಾಮಾನ್ಯ ದಾಖಲೆಗಳು

ರದ್ದಾದ ಚೆಕ್

ಬ್ಯಾಂಕ್ ಲೆಕ್ಕವಿವರಣೆ

ಯೋಜಿತ ಚಿಕಿತ್ಸೆಯ ವೆಚ್ಚ (ಗರ್ಭಗುಡಿಯಿಂದ ನೀಡಲಾಗುತ್ತದೆ.)

ಅರ್ಜಿದಾರರ ರಿಸ್ಕ್ ಪ್ರೊಫೈಲ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಆಧರಿಸಿ, ಸಾಲದ ಮೊತ್ತವನ್ನು ಅನುಮೋದಿಸಲಾಗಿದೆ. ಚಿಕಿತ್ಸೆಯ ಆರಂಭದ ದಿನದಂದು ಇದನ್ನು ನೇರವಾಗಿ ಆಸ್ಪತ್ರೆಗೆ ವಿತರಿಸಲಾಗುತ್ತದೆ. ಇಎಂಐಗಳು ವಿತರಣೆಯಾದ ತಿಂಗಳಿನಿಂದ ಆರಂಭವಾಗುತ್ತವೆ.

ಗಮನಿಸಬೇಕಾದ ಕೆಲವು ಪ್ರಮುಖಾಂಶಗಳು

ರೋಗಿಗೆ 0% ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಹಾಗಾಗಿ ಹಣಕಾಸಿನ ಕಾರಣದಿಂದಾಗಿ ರೋಗಿಯ ಮೇಲೆ ಯಾವುದೇ ಹೆಚ್ಚುವರಿ ಹೊರೆ ಇಲ್ಲ

ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಆಧರಿಸಿ ವಿತರಿಸಬೇಕಾದ ಮೊತ್ತವನ್ನು ನಿರ್ಧರಿಸಲಾಗುತ್ತದೆ

ಚಿಕಿತ್ಸೆ ಪಡೆಯಲಿರುವ  ದಂಪತಿಗಳು ಬ್ಯಾಂಕ್ ಖಾತೆ ಅಥವಾ ಸರಿಯಾದ ವಿಳಾಸ ಪುರಾವೆ ಹೊಂದಿಲ್ಲದಿದ್ದರೆ, ದಂಪತಿಗಳು ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಸಂಬಂಧಿಕರನ್ನು ಪ್ರಾಥಮಿಕ ಅರ್ಜಿದಾರರಾಗಿ ಕೇಳಬಹುದು. ದಂಪತಿಗಳು ಸಹ-ಅರ್ಜಿದಾರರಾಗಬಹುದು

ಹೆಚ್ಚಿನ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯುತ್ತದೆ. ಆದ್ದರಿಂದ ದಂಪತಿಗಳು ಅನೇಕ ಬಾರಿ ಹಣಕಾಸು ಕಂಪನಿಯ ಕಚೇರಿಗೆ ಹೋಗಬೇಕಾಗಿಲ್ಲ. ಸಾಮಾನ್ಯವಾಗಿ, ಗರ್ಭಗುಡಿಯಲ್ಲಿ ವ್ಯಕ್ತಿಗತ ಸಭೆ ನಡೆಯುತ್ತದೆ

ಕೆಲವು ಕಾರಣಗಳಿಂದ ಚಿಕಿತ್ಸೆಯನ್ನು ರದ್ದುಗೊಳಿಸಿದರೆ ಅಥವಾ ಚಿಕಿತ್ಸೆಯ ವೆಚ್ಚವು ಯೋಜಿತ ವೆಚ್ಚಕ್ಕಿಂತ ಕಡಿಮೆಯಾದರೆ, ಆ ಮೊತ್ತವನ್ನು ರೋಗಿಗೆ ಮರುಪಾವತಿಸಲಾಗುತ್ತದೆ

ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ವೆಚ್ಚ ಏರಿಕೆಯಾಗಿದ್ದರೆ, ದಂಪತಿಗಳು ಅದೇ ಕಂಪನಿಯಿಂದ ಹೆಚ್ಚುವರಿ ಹಣಕಾಸು ಪಡೆಯಲು ಯೋಜಿಸಬಹುದು. ಆ ಪ್ರಕ್ರಿಯೆಯು ತುಂಬಾ ಸರಳವಾಗಿದೆ

ದಂಪತಿಗಳು 3 ತಿಂಗಳು, 6 ತಿಂಗಳು, 9 ತಿಂಗಳು ಅಥವಾ 12 ತಿಂಗಳುಗಳ EMI ಆಯ್ಕೆಗಳನ್ನು ಆರಿಸಿಕೊಳ್ಳಬಹುದು

ಗರ್ಭಗುಡಿ ಚಿಕಿತ್ಸೆಗೆ ಹಣಕಾಸು ಒದಗಿಸುವುದಿಲ್ಲ, ಗರ್ಭಗುಡಿ ಹಣಕಾಸು ಕಂಪನಿಯ ಭಾಗವೂ ಅಲ್ಲ

ಇದು ರೋಗಿಗಳಿಗೆ ಸಹಾಯ ಮಾಡಲು ಹಣಕಾಸು ಕಂಪನಿ ಮತ್ತು ಗರ್ಭಗುಡಿ ನಡುವಿನ ಪಾಲುದಾರಿಕೆ

ಕಂತುಗಳ ಸಂಗ್ರಹವು ಹಣಕಾಸು ಕಂಪನಿಯ ಏಕೈಕ ಜವಾಬ್ದಾರಿಯಾಗಿದೆ. ಗರ್ಭಗುಡಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ