ಐ ಪಿ ಎಲ್ ಚಿಕಿತ್ಸೆ

ನಮ್ಮ ಐಪಿಎಲ್ ಚಿಕಿತ್ಸೆಯೊಂದಿಗೆ ಮನೆಯಿಂದಲೇ  ಐವಿಎಫ್ ಆರಂಭಿಸಿ

ಐಪಿಎಲ್ ಎಂದರೆ ಇಂಜೆಕ್ಷನ್, ಫಾರ್ಮಸಿ ಮತ್ತು ಲ್ಯಾಬ್. ಇದು ಗರ್ಭಗುಡಿಯ ಅತ್ಯುತ್ಕ್ರಷ್ಟ ಸೇವೆಯಾಗಿದ್ದು, ಪ್ರಸ್ತುತ ಸಾಂಕ್ರಾಮಿಕದ  ಸಮಯದಲ್ಲಿ ಸಂತಾನಹೀನತೆಗೆ  ಚಿಕಿತ್ಸೆಯನ್ನು ಬಯಸುವ ರೋಗಿಗಳಿಗೆ ವಿಶೇಷವಾಗಿ ಆರಂಭಿಸಲಾಗಿದೆ. ನಿಮ್ಮ ಮನೆಯ ಸುರಕ್ಷತೆಯಿಂದಲೇ IVF ಚಿಕಿತ್ಸೆಯನ್ನು ಪ್ರಾರಂಭಿಸಲು ನಿಮಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.

ಮನೆಯಿಂದಲೇ ಐ ವಿ ಫ್ ಎಂದರೇನು?

ನಿಮಗೆ   ಮನೆಯಿಂದ ಹೊರಹೋಗುವ ಬಗ್ಗೆ ಚಿಂತೆ  ಇದ್ದರೆ, ಈಗ ನಮ್ಮ ಫಲವತ್ತತೆ ತಜ್ಞರೊಂದಿಗೆ ಆನ್‌ಲೈನ್ ಅಥವಾ ಫೋನ್ ಸಮಾಲೋಚನೆ ಪಡೆಯಿರಿ.  ನೀವು ಮಾಡಬೇಕಾಗಿರುವುದೇನೆಂದರೆ   ನಮಗೆ ಕರೆ ಮಾಡಿ  ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಿ  ಮತ್ತು ನಮ್ಮ ಫಲವತ್ತತೆ ತಜ್ಞರು ಚಿಕಿತ್ಸೆ, ಪರೀಕ್ಷೆಗಳು, ವೆಚ್ಚಗಳು, ಸಮಯ ಮತ್ತು ಹೆಚ್ಚಿನವುಗಳ ಕುರಿತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನೀವು ಈಗಾಗಲೇ ಪರ್ರಿಕ್ಷೆಯ ವರದಿಗಳನ್ನು ಹೊಂದಿದ್ದರೆ, ನಾವು ಚಿಕಿತ್ಸೆಯನ್ನು ಸಹ ಸೂಚಿಸುತ್ತೇವೆ. ಈ ಅಲಭ್ಯತೆಯನ್ನು ಇಂದು ನಿಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಿ.

ಎರಡನೇ ಅಭಿಪ್ರಾಯವನ್ನು ಪಡೆಯಲು ಇದು ಬಹುಶಃ ನಿಮಗೆ  ಅತ್ಯುತ್ತಮ ಅವಕಾಶವಾಗಿದೆ!

ಗರ್ಭಗುಡಿಯೇ  ಏಕೆ?

ಗರ್ಭಗುಡಿಯಲ್ಲಿ ನಾವು ಅತ್ಯಾಧುನಿಕ ಮೂಲಸೌಕರ್ಯ,  ಸಂತಾನೋತ್ಪತ್ತಿ ಸಹಾಯಕ ತಂತ್ರಜ್ಞಾನ ಮತ್ತು ಕೈಗೆಟುಕುವ ಬೆಲೆಯಲ್ಲಿ ಪರಿಣಿತ ವೈದ್ಯರೊಂದಿಗೆ ಸಂತಾನಹೀನತೆಗೆ ಚಿಕಿತ್ಸೆಯನ್ನು ನೀಡುತ್ತೇವೆ. ನಮ್ಮ ಅದ್ಭುತ ಯಶಸ್ಸಿನ ದರಗಳು ಇದಕ್ಕೆ ಸಾಕ್ಷಿಯಾಗಿದೆ. ಸಂತಾನ ಹೀನತೆಯ ನಿವಾರಣೆಯ  ನಮ್ಮ ಸಮಗ್ರ ವಿಧಾನವು ಆರಂಭಿಕ ಮೌಲ್ಯಮಾಪನಗಳು, ರೋಗನಿರ್ಣಯ, ಫಲವತ್ತತೆ ಚಿಕಿತ್ಸೆಗಳು, ಸುಧಾರಿತ ವೈಜ್ಞಾನಿಕ ತಂತ್ರಗಳು ಮತ್ತು ಸಮಾಲೋಚನೆಯೊಂದಿಗೆ ಆರಂಭವಾಗುತ್ತದೆ. ಮಾತೃತ್ವಕ್ಕೆ ನಿಮ್ಮ ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ನಾವು ನಿಮ್ಮೊಂದಿಗಿದ್ದೇವೆ ಎಂದು ಖಚಿತಪಡಿಸುತ್ತೇವೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು?

ಐಪಿಎಲ್ ಎಂದರೆ ಇಂಜೆಕ್ಷನ್, ಫಾರ್ಮಸಿ ಮತ್ತು ಲ್ಯಾಬ್. ಇದು ಗರ್ಭಗುಡಿಯ ಅತ್ಯುತ್ಕ್ರಷ್ಟ  ಸೇವೆಯಾಗಿದ್ದು, ಪ್ರಸ್ತುತ ಸಾಂಕ್ರಾಮಿಕ ಸಮಯದಲ್ಲಿ ಸಂತಾನ ಹೀನತೆಗೆ  ಚಿಕಿತ್ಸೆಯನ್ನು ಬಯಸುವ ರೋಗಿಗಳಿಗೆ ವಿಶೇಷವಾಗಿ ಆರಂಭಿಸಲಾಗಿದೆ. ನಿಮ್ಮ ಮನೆಯ ಸುರಕ್ಷತೆಯಿಂದಲೇ IVF ಚಿಕಿತ್ಸೆಯನ್ನು ಪ್ರಾರಂಭಿಸಲು ನಿಮಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.

ಕೋವಿಡ್ -19 ನ ಗುಣಲಕ್ಷಣವಾದ ದೇಹದ  ತಾಪಮಾನದ ಪರೀಕ್ಷೆ ಮತ್ತು ರೋಗಲಕ್ಷಣಗಳನ್ನು ಪರೀಕ್ಷಿಸುವ ಮೂಲಕ ನಾವು ಅವರನ್ನು ಕಳುಹಿಸುವ ಮೊದಲು ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯನ್ನು ಮಾಡುತ್ತೇವೆ ಮತ್ತು ನಂತರವೇ ಅವರನ್ನು ಕಳುಹಿಸುತ್ತೇವೆ. ಅವರು ನಿಮ್ಮ ಮನೆಗೆ ಪ್ರವೇಶಿಸುವ ಮೊದಲು ಮಾಸ್ಕ್ ಧರಿಸುತ್ತಾರೆ ಮತ್ತು ಸ್ಯಾನಿಟೈಜರ್ ಅನ್ನು ಬಳಸುತ್ತಾರೆ.

ಸರ್ಕಾರದ ನಿಯಮಗಳ ಪ್ರಕಾರ ನಾವು ನಮ್ಮ ಸಿಬ್ಬಂದಿಯನ್ನು ಕೋವಿಡ್ ಭಾದಿತ ಎಂದು ಗುರುತಿಸಲಾಗುವ  ಕೆಂಪು ವಲಯಕ್ಕೆ ಕಳುಹಿಸಲು ಸಾಧ್ಯವಿಲ್ಲ.

ಇದು ಪಾವತಿಸಬೇಕಾದ ಸೇವೆಯಾಗಿದ್ದು ನಿಮ್ಮ ಸ್ಥಳವನ್ನು/ದೂರವನ್ನು  ಅವಲಂಬಿಸಿರುತ್ತದೆ. 1 ರಿಂದ 10 ಕಿ.ಮೀ.ವರೆಗಿನ ಮನೆಗಳಿಗೆ, ವೆಚ್ಚ ರೂ. 400/- ಮತ್ತು 10 ರಿಂದ 30 ಕಿಮೀ ನಡುವೆ, ವೆಚ್ಚ ರೂ .700/-.

ರೋಗಿಯ ಸುರಕ್ಷತೆ ನಮಗೆ ಬಹಳ ಮುಖ್ಯ ಮತ್ತು ರೋಗಿಯ ಪ್ರಯಾಣವನ್ನು ಮಿತಿಗೊಳಿಸುವುದು ಸೂಕ್ತ. ಆದ್ದರಿಂದ ನಾವು ಭೇಟಿಗಳನ್ನು ಕಡಿಮೆ ಮಾಡಲು ಬಯಸುತ್ತೇವೆ.

ನಿಮ್ಮ ಸಂತಾನಹೀನತೆಯ  ಸಮಸ್ಯೆಗಳು ಮತ್ತು ಈ ಹಿಂದೆ ತೆಗೆದುಕೊಂಡ ಚಿಕಿತ್ಸೆಗಳ ಬಗ್ಗೆ ನೀವು ಚರ್ಚಿಸಬಹುದು. ಸಂತಾನಹೀನತೆಗೆ ಸಂಬಂಧಿಸಿದ ಏನನ್ನಾದರೂ  ನೀವು ವೈದ್ಯರನ್ನು ಕೇಳಬಹುದು.

ಕಾರ್ಯವಿಧಾನವು ಒಂದೇ ಆಗಿರುವುದರಿಂದ ಮತ್ತು ಬದಲಾಗುವುದಿಲ್ಲವಾದ್ದರಿಂದ, ನಾವು ಆಸ್ಪತ್ರೆಯಲ್ಲಿ ವಿಧಿಸುವ ಶುಲ್ಕಗಳನ್ನೇ ವಿಧಿಸುತ್ತೇವೆ.. ವಾಸ್ತವವಾಗಿ, ಮನೆಯಲ್ಲಿ ಈ ಸೇವೆಗಳನ್ನು ಒದಗಿಸಲು ನಮಗೆ ಹೆಚ್ಚು ವೆಚ್ಚವಾಗುತ್ತದೆ ಆದರೆ ನಾವು ನಿಮಗೆ ಹೊರೆಯಾಗುವುದಿಲ್ಲ.

ನಿಮಗಾಗಿ ಪ್ರಯಾಣವನ್ನು ಕಡಿಮೆ ಮಾಡಲು ನಾವು ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತೇವೆ, ಔಷಧಿಗಳನ್ನು ವಿತರಿಸುತ್ತೇವೆ ಮತ್ತು ನಿಮಗೆ  ಮನೆಯಲ್ಲಿಯೇ  ಇಂಜೆಕ್ಷನ್ ನೀಡುತ್ತೇವೆ.

ಫಲಿತಾಂಶಗಳು ಅಸಮಂಜಸವಾಗಿರುವುದರಿಂದ ನಾವು ವೀರ್ಯ ವಿಶ್ಲೇಷಣೆ ಮಾಡುವುದಿಲ್ಲ. ಈ ಪರೀಕ್ಷೆಗಳನ್ನು 30 ನಿಮಿಷಗಳ ಒಳಗೆಯೇ ಮಾಡ ಬೇಕಾಗುತ್ತದೆ.

ಇದು 24/7 ಸೌಲಭ್ಯವಲ್ಲ, ಆದರೆ ನೀವು ನಿರ್ದಿಷ್ಟ ಸಮಯದಲ್ಲಿ ಕೆಲವು ಇಂಜೆಕ್ಷನ್, ಔಷಧಿ ಅಥವಾ ಸ್ಕ್ಯಾನ್‌ಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದರೆ, ನಾವು ಯಾವ ಸಮಯದಲ್ಲಾದರೂ ಸೇವೆಯನ್ನು ನೀಡುತ್ತೇವೆ.

ಈ ಸೇವೆಯು IVF, IUI ಮತ್ತು ಮತ್ತು PCOD ಸಂಬಂಧಿತ ಸಮಸ್ಯೆಗಳಿಗೆ ಲಭ್ಯವಿದೆ.

ಕೇವಲ ಇಬ್ಬರು  ಸದಸ್ಯರು ನಿಮ್ಮನ್ನು ಭೇಟಿ ಮಾಡುತ್ತಾರೆ, 1 ಚಾಲಕ ಮತ್ತು 1 ಸಿಬ್ಬಂದಿ ನರ್ಸ್ ಅಥವಾ ಲ್ಯಾಬ್ ಸಹಾಯಕ. ಚಾಲಕ ಹೊರಗೆ ಇರುತ್ತಾನೆ.

ವೈದ್ಯರು ಭೇಟಿ ನೀಡುವುದಿಲ್ಲ, ಆದರೆ ಅವರು ಆನ್‌ಲೈನ್‌ನಲ್ಲಿ ಮತ್ತು ಫೋನ್ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ.

ಇಲ್ಲ. ಸ್ಕ್ಯಾನರ್‌ಗಳು ಮತ್ತು ಸಂಬಂಧಿತ ಉಪಕರಣಗಳನ್ನು ಸಾಗಿಸಲು ಸಾಧ್ಯವಿಲ್ಲ.

ನಾವು ಅದನ್ನು ನೀಡುವುದಿಲ್ಲಾಏಕೆಂದರೆ ಚಿಕಿತ್ಸೆಯ ಯಶಸ್ಸು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಕೇವಲ ಐಪಿಎಲ್ ಸೇವೆಯ ಮೇಲೆ ಅಲ್ಲ.

ನಮ್ಮ ವಿಶೇಷತೆಗಳು

Female

Male

Advanced

DIAGNOSIS

 • Natural pregnancy
 • All latest female infertility solutions
 • IVF
 • IUI
 • ICSI
 • Laparoscopy
 • Hysteroscopy
 • Embryo Transfer
 • Embryo Donation
 • Egg Donation
   
   
 • TESA and PESA
 • Sperm Donation
 • Sperm Freezing
 • Varicocele
 • All other latest Male infertility procedures
 • Egg Freezing
 • Endometrial Rejuvenation
 • Sequential Transfer
 • MACS
 • Blood Investigations
 • Semen Analysis
 • Ultrasound scan
 • PGS Testing
 • PGD Testing
 • ERA testing
 • Diagnosing POF
 • HSG