ಐ ವಿ ಎಫ್ ನ ಯಶಸ್ಸಿನ ಪ್ರಮಾಣ

IVF ನ ಯಶಸ್ಸಿನ ದರಗಳು

ದಂಪತಿಗಳು ಪೋಷಕರಾಗುತ್ತಾರೆಯೇ ? ಎಂಬುದನ್ನು  ಅನೇಕ ಅಂಶಗಳು ನಿರ್ಧರಿಸುತ್ತವೆ, ಆದರೆ ಮಹಿಳೆಯ ವಯಸ್ಸು  ಈ ಪಟ್ಟಿಯ ಮೇಲ್ಭಾಗದಲ್ಲಿದೆ. 21 ನೇ ವಯಸ್ಸಿನಲ್ಲಿ, ಮಹಿಳೆಯು ಫಲವತ್ತತೆಯ ಉತ್ತುಂಗದಲ್ಲಿದ್ದಾಗ ಮತ್ತು ಆಕೆಯ 90% ಮೊಟ್ಟೆಗಳು ಸಾಮಾನ್ಯವಾಗಿದ್ದಾಗ, ಆಕೆಯ ಗರ್ಭಧಾರಣೆಯ ಅವಕಾಶವು ಅತ್ಯಧಿಕವಾಗಿರುತ್ತದೆ. ಇದು ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ ಮತ್ತು 36 ರ ನಂತರ ತೀವ್ರವಾಗಿ ಕುಸಿಯುತ್ತದೆ.

ಐ ಯು ಐ ಯ ಯಶಸ್ಸಿನ ಪ್ರಮಾಣ

ಪ್ರಪಂಚದಾದ್ಯಂತದ ಸಾಮಾನ್ಯವಾಗಿ ಐ ಯು ಐ ನ  ಯಶಸ್ಸಿನ ಪ್ರಮಾಣ, ಎಲ್ಲಾ ವಯೋಮಾನದವರಿಗೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿಶತ 10% ಮತ್ತು 17% ನಡುವೆ ಇರುತ್ತದೆ. ಆದರೆ ಗರ್ಭಗುಡಿಯಲ್ಲಿ, ನಾವು ಐ ಯು ಐನಲ್ಲಿ ಅದ್ಭುತವಾದ ಯಶಸ್ಸನ್ನು ಸಾಧಿಸಿದ್ದೇವೆ.ನಮ್ಮ  ಎಲ್ಲಾ ಶಾಖೆಗಳಲ್ಲಿ ಮತ್ತು ಕಳೆದ ಕೆಲವು ವರ್ಷಗಳಲ್ಲಿ, ನಾವು 22% ರಿಂದ 31% ವರೆಗೆ ಯಶಸ್ಸಿನ ಪ್ರಮಾಣವನ್ನು ಸಾಧಿಸಿದ್ದೇವೆ. ನಾವು ಮಾಡಿದ ಪೇಟೆಂಟ್ ಪ್ರಕ್ರಿಯೆ ವರ್ಧನೆಗಳಿಗೆ ಸಾಕ್ಷಿಕರಿಸುತ್ತೇವೆ.

ಐ ವಿ ಎಫ್ ನ ಯಶಸ್ಸಿನ ಪ್ರಮಾಣ

ಐ ವಿ ಎಫ್ ನ ಯಶಸ್ಸಿನ ಪ್ರಮಾಣವು  ಹಲವಾರು ಪ್ರಮುಖ ಅಂಶಗಳನ್ನು ಅವಲಂಬಿಸಿದೆ. . ಪ್ರಪಂಚದಾದ್ಯಂತ, ಐವಿಎಫ್ ಯಶಸ್ಸಿನ ಪ್ರಮಾಣವು ಪ್ರತಿಶತ 30% ರಿಂದ 37% ರ ನಡುವಿನಲ್ಲಿದೆ , ಆದರೆ ನಮ್ಮ ಎಲ್ಲಾ ಕೇಂದ್ರಗಳಲ್ಲಿ 55% ರಿಂದ 67% ಯಶಸ್ಸನ್ನು ನಾವು ನಿರಂತರವಾಗಿ ಸಾಧಿಸಿದ್ದೇವೆ.  ಭ್ರೂಣ ದಾನಿಗಳು ಮತ್ತು ಬ್ಲಾಸ್ಟೊಸಿಸ್ಟ್ ವರ್ಗಾವಣೆಯ ಯಶಸ್ಸಿನ ಪ್ರಮಾಣ ಅತ್ಯಂತ ಹೆಚ್ಚಿದೆ.

ವಯಸ್ಸು

ಒಂದು ಮಹಿಳೆಯ ಸಾಮಾನ್ಯ ಅಥವಾ ಸಹಜ ಆರೋಗ್ಯ ಮತ್ತು ವಯಸ್ಸು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ. ಹಾರ್ಮೋನಿನ ಮಟ್ಟ ಮತ್ತು ದೈಹಿಕ ಆರೋಗ್ಯದ ಪರಿಸ್ಥಿತಿಗಳು - ಸಕ್ಕರೆ ಕಾಯಿಲೆ, ಹೈಪರ್ ಟೆನ್ ಶನ್, ಥೈರಾಯ್ಡ್ ಸ್ಥಿತಿಗತಿ. ಒತ್ತಡದ ಮಟ್ಟ  ಮುಂತಾದವುಗಳು.

ಪ್ರಚೋದನೆ

ಉತ್ತೇಜನಕಾಗಿ ಬಳಸಲಾದ ಪ್ರೋಟೋಕಾಲ್ ಗಳು .ಫಲವತ್ತತೆ ತಜ್ಞರ ಪರಿಣತಿಯ ಆಧಾರದ ಮೇಲೆ,ಹೆಚ್ಚು ಪರಿಣಾಮಕಾರಿ ಅಥವಾ ಕಡಿಮೆ ಪರಿಣಾಮಕಾರಿಯಾಗಬಹುದು.

ಹಾರ್ಮೋನ್ ಚುಚ್ಚುಮದ್ದು ಮತ್ತು ಐವಿಎಫ್ ಗಾಗಿ ಬಳಸಲಾದ ಮಾಧ್ಯಮ

ಉತ್ಪಾದನಾ ಸೌಲಭ್ಯವನ್ನು ಆಧರಿಸಿ, ಗುಣಮಟ್ಟದ ನಿಯಂತ್ರಣಗಳನ್ನು ಅನುಸರಿಸಲಾಗುತ್ತದೆ. ಮತ್ತು  ಈ ಪ್ರಕ್ರಿಯೆಯನ್ನು ಅನುಸರಿಸಿ, ವಿಭಿನ್ನ ಚುಚ್ಚುಮದ್ದುಗಳು ಒಂದೇ ರೀತಿಯ ಸನ್ನಿವೇಶಗಳಲ್ಲಿ ವಿಭಿನ್ನ ಫಲಿತಾಂಶಗಳನ್ನು ನೀಡಬಹುದು. ಆದ್ದರಿಂದ ಪ್ರಕ್ರಿಯೆಗೆ ಉತ್ತಮ ಇಂಜೆಕ್ಷನ್ ಮತ್ತು ಅತ್ಯುತ್ತಮ ಐವಿಎಫ್ ಮಾಧ್ಯಮಕ್ಕೆ ಹೋಗುವುದು ಉತ್ತಮವಾದುದಾಗಿದೆ.

ಆಸ್ಪತ್ರೆ ಮತ್ತು -ಮೂಲಸೌಕರ್ಯ

ಆಸ್ಪತ್ರೆ ಮತ್ತು -ಮೂಲಸೌಕರ್ಯವು  ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಆಂಡಾಣು ತೆಗೆಯಲು ಬಳಸಲಾಗುವ  ಆಪರೇಷನ್ ಥಿಯೇಟರ್ ಮತ್ತು ಐ ವಿ ಎಫ್ ಅಥವಾ ಐ ಸಿ ಎಸ್ ಐ  ಮೂಲಕ ಫಲೀಕರಣ ಮಾಡುವ ಭ್ರೂಣಶಾಸ್ತ್ರ ಪ್ರಯೋಗಾಲಯ. ಇವುಗಳನ್ನು ಅತ್ಯುತ್ತಮ ಮಾನದಂಡಗಳ ಪ್ರಕಾರ ನಿರ್ವಹಿಸದಿದ್ದರೆ, ಯಶಸ್ಸಿನ ಪ್ರಮಾಣ ತೀವ್ರವಾಗಿ ಕುಸಿಯುತ್ತದೆ.

ಫಲವತ್ತತೆ ತಜ್ಞರ ಸಮಿತಿ

ಫಲವತ್ತತೆ ತಜ್ಞರು, ಭ್ರೂಣಶಾಸ್ತ್ರಜ್ಞರು , ಆಂಡ್ರಾಲಜಿ ಮತ್ತು ಪ್ರಯೋಗಾಲಯದ ಉಸ್ತುವಾರಿ ನೋಡಿಕೊಳ್ಳುವವರು  ಮತ್ತು ಸಹಾಯಕ ಸಿಬ್ಬಂದಿ, ಎಲ್ಲರೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ.

ಮೇಲಿನ ಎಲ್ಲಾ ಐದು ಅಂಶಗಳಲ್ಲಿ ಗರ್ಭಗುಡಿಯು ಹೆಚ್ಚು ಯಶಸ್ಸನ್ನು  ಗಳಿಸುತ್ತದೆ.ನಮ್ಮಲ್ಲಿ ಅತ್ಯುತ್ತಮವಾದ ಮೂಲಸೌಕರ್ಯಗಳಿವೆ, ಸಾವಿರಾರು ಯಶಸ್ವಿ ಐವಿಎಫ್  ನಿರ್ವಹಿಸಿದ ಶ್ರೇಷ್ಠ ತಜ್ಞರ ಸಮಿತಿ ಇದೆ. , ನಾವು ಅತ್ಯುತ್ತಮ ಚುಚ್ಚುಮದ್ದು ಮತ್ತು ಮಾಧ್ಯಮವನ್ನು ಬಳಸುತ್ತೇವೆ (ಔಷಧಗಳು ಮತ್ತು ಚಿಕಿತ್ಸೆಗಾಗಿ ಬಳಸಲಾಗುವ ಮಾಧ್ಯಮದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ) ಮತ್ತು ಇತ್ತೀಚಿನ ಆಧುನಿಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ನಾವು ನಮ್ಮ ಚಿಕಿತ್ಸೆಯ ಪ್ರೋಟೋಕಾಲ್‌ಗಳನ್ನು ನಿರಂತರವಾಗಿ ಅಪ್‌ಗ್ರೇಡ್ ಮಾಡುತ್ತೇವೆ. ತಂತ್ರಜ್ಞಾನದಲ್ಲಿ. ನಮ್ಮ ಯಶಸ್ಸಿನ ದರಗಳು ಅತಿ ಹೆಚ್ಚಾಗಿರುವುದಕ್ಕೆ  ಇದು ಒಂದು  ಕಾರಣವಾಗಿದೆ.